ನಾಗಚೈತನ್ಯ ಜೊತೆಗಿದ್ದ ಹಳೆ ನೆನಪುಗಳನ್ನು ಅಳಿಸಿ ಹಾಕಿದ ನಟಿ ಸಮಂತಾ!

71
firstsuddi

ಹೈದರಾಬಾದ್ : ಟಾಲಿವುಡ್ ನಟಿ ಸಮಂತಾ ವಿಚ್ಛೇದನ ಬಳಿಕ ತಮ್ಮ ದೈನಂದಿನ ಹವ್ಯಾಸವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಮೂಲಕ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ನಾಗಚೈತನ್ಯ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ಹಳೆ ನೆನಪುಗಳನ್ನು ಅಳಿಸಿ ಹಾಕಿದ್ದಾರೆ.

ಸಮಂತಾ ಅವರು, ಒಂದಷ್ಟು ಚೆಂದದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ವಿಚ್ಛೇದನ ಬಳಿಕ ಅವರ ನಿಶ್ಚಿತಾರ್ಥದ ಫೋಟೋ ಹಾಗೂ ಮದವೆಯ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇವರ ಈ ನಿರ್ಧಾರದಿಂದ ಸ್ಯಾಮ್ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.

ಸದ್ಯ ದಾಂಪತ್ಯ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯಲು ಸಮಂತಾ ಪ್ರವಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಷಿಕೇಷಕ್ಕೆ ಭೇಟಿ ನೀಡಿದ್ದರು.