ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಸ್ನೇಹಿತ ಅರೆಸ್ಟ್!

73
firstsuddi

ಮಣಿಪಾಲ : ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.

ದೆಹಲಿ ಮೂಲದ ಆರ್ಯನ್ ಚಂದಾವನಿ ಬಂಧಿತ ಆರೋಪಿ. ಅಕ್ಟೋಬರ್ 16 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದ್ರಾಳಿಯ ಫ್ಲ್ಯಾಟ್ ನಲ್ಲಿ ಕುಡಿದ ಮತ್ತಿನಲ್ಲಿ ಗೆಳತಿಯ ಮೇಲೆ ಆರೋಪಿ ಆರ್ಯನ್ ಚಂದಾವನಿ ಅತ್ಯಾಚಾರ ನಡೆಸಿದ್ದು, ಈ ಕುರಿತು ಯುವತಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆಕೆಯ ದೂರಿನ ಮೇರೆಗೆ ಮಣಿಪಾಲ ಪೋಲಿಸರು ಆರ್ಯನ್ ಚಂದಾವನಿಯನ್ನು ಬಂಧಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.