ನಾನು ಗಂಡನಿಗೆ ಕಿಸ್ ಕೊಡುತ್ತೇನೆ, ನೀವು ನನ್ನನ್ನು ತಡೆಯಬಹುದೇ? – ಪೋಲಿಸರಿಗೆ ಅವಾಜ್ ಹಾಕಿದ ಮಹಿಳೆ..!

167
firstsuddi

ದೆಹಲಿ : ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದ ದಂಪತಿಯ ಕಾರು ತಡೆದು ಪೊಲೀಸರು ಪ್ರಶ್ನಿಸಿದ್ದಕ್ಕೆ ದಂಪತಿ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ದರಿಯಾಗಂಜ್ ನಲ್ಲಿ  ನಡೆದಿದೆ.

ನಿನ್ನೆ ಸಂಜೆ ದಂಪತಿ ಕಾರಿನಲ್ಲಿ ಹೋಗುತ್ತಿದ್ದಾಗ ಕಾರಿನ ಒಳಗೆ ಮಾಸ್ಕ್ ಏಕೆ ಧರಿಸಿಲ್ಲ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕಫ್ರ್ಯೂ ಪಾಸ್ ಸಹ ಅವರ ಬಳಿ ಇರಲಿಲ್ಲ. ದಂಪತಿ ಸರಿಯಾಗಿ ಉತ್ತರ ನೀಡದೇ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.
ನಾನು ನನ್ನ ಗಂಡನಿಗೆ ಮುತ್ತು ಇಡುತ್ತೇನೆ ನೀವು ನನ್ನನ್ನು ತಡೆಯಬಹುದೇ? ನೀವು ನನ್ನ ಕಾರನ್ನು ಏಕೆ ನಿಲ್ಲಿಸಿದ್ದೀರಿ? ಮಾಸ್ಕ್ ತೊಡುವುದು, ಬಿಡುವುದು ನನ್ನಿಷ್ಟ ಎಂದು ಮಹಿಳೆ ಪೊಲೀಸರಿಗೆ ಅವಾಜ್ ಹಾಕಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.