ನಾನು ಬಿಜೆಪಿಗೆ ಸೇರಲು ಮೋದಿಯವರೆ ಮೂಲ ಕಾರಣ. ಕಳೆದ 5 ವರ್ಷದಲ್ಲಿ ಯಾವುದೇ ಕಳಂಕವಿಲ್ಲದೆ ಆಡಳಿತ ಕೊಟ್ಟವರು- ಎಸ್.ಎಂ ಕೃಷ್ಣ.

204
Firstsuddi

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಅವರು ಮಾಧ್ಯಮದೊಂದಿಗೆ ಸಂವಾದ ನಡೆಸಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ನನ್ನ ಒಬ್ಬನನ್ನು ಬಿಟ್ಟು ಬೇರೆ ಯಾರಾದರು ಸಿಎಂ ಆಗಲಿ ಎಂದು ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಪಕ್ಷಕ್ಕೆ ಷರತ್ತನ್ನು ಹಾಕಿತ್ತು. ಹೀಗಾಗಿ ನನ್ನನ್ನು ಮಹಾರಷ್ಟ್ರ ರಾಜ್ಯಪಾಲನಾಗಿ ನೇಮಿಸಿದರು. ನಾನು ಎಂದಿಗೂ ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ, ಹಿಂಬಾಗಿಲ ರಾಜಕಾರಣ ಮಾಡುತ್ತಿರುವವರು ಅವರು ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿಗಾಗಿ ನಾನು ಹಲವು ಯೋಜನೆಗಳನ್ನು ರೂಪಿಸಿದ್ದು, ನನ್ನ ಅವಧಿಯಲ್ಲಿ ಆರಂಭವಾದ ಯೋಜನೆ ಅದೇ ವೇಗದಲ್ಲಿ ಮುಂದುವರಿದಿದ್ದರೆ ಬೆಂಗಳೂರು ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು. ನನ್ನ ನಂತರ  ಬಂದವರಿಗೆ ಅದು ಬೇಕಾಗಿರಲಿಲ್ಲ. ನಾನು ಬಿಜೆಪಿಗೆ ಸೇರಲು ಮೋದಿಯವರೆ ಮೂಲ ಕಾರಣ. ಕಳೆದ 5 ವರ್ಷದಲ್ಲಿ ಯಾವುದೇ ಕಳಂಕವಿಲ್ಲದೆ ಆಡಳಿತ ಕೊಟ್ಟವರು ಮೋದಿಯವರು ಇದರಿಂದಾಗಿ ಅವರೇ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.