ನಾಯಿಯನ್ನು ಎಲ್ಲಾದರೂ ದೂರ ಬಿಟ್ಟುಬಿಡು ಎಂದು ತಂದೆ ಹೇಳಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ…

333
firstsuddi

ಚೆನ್ನೈ : ನಾಯಿ ಸಾಕಬೇಡ ಎಂದು ತಂದೆ ಹೇಳಿದ್ದಕ್ಕೆ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕವಿತಾ(24) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದ್ದು, ಕವಿತಾ ಅವರು ಕಳೆದ 2 ರ್ಷಗಳಿಂದ ನಾಯಿಯನ್ನು ಸಾಕುತ್ತಿದ್ದರು. ನಾಯಿ ಪ್ರತಿದಿನ ನಿರಂತರವಾಗಿ ಬೊಗಳುತ್ತಿದ್ದ ಕಾರಣ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಕವಿತಾ ಅವರ ತಂದೆ ಇನ್ನು ಮುಂದೆ ನಾಯಿ ಸಾಕಬೇಡ ಎಂದು ಹೇಳಿದ್ದರು. ತಂದೆಯ ಮಾತನ್ನು ಪರಿಗಣಿಸದ ಕವಿತಾ ಅವರು ನಾಯಿ ಸಾಕುವುದನ್ನು ಮುಂದುವರೆಸಿದ್ದರು. ಬುಧವಾರ ರಾತ್ರಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದ ಕಾರಣ ನಾಯಿ ರಾತ್ರಿಯಿಡಿ ಬೊಗಳುತ್ತಿತ್ತು. ಇದರಿಂದ ಕೋಪಗೊಂಡ ನೆರೆ ಮನೆಯವರು ಕವಿತಾ ಅವರ ತಂದೆ ಬಳಿ ಹೇಳಿದ್ದಾರೆ. ಹೀಗಾಗಿ ತಂದೆ ಕವಿತಾ ಅವರಿಗೆ ಬೈದು ನಾಯಿಯನ್ನು ಬೇರೆಡೆಗೆ ಬಿಟ್ಟು ಬರುವಂತೆ ಹೇಳಿದ್ದಾರೆ. ತಂದೆಯ ಮಾತಿನಿಂದ ಮನನೊಂದ ಕವಿತಾ ಅವರು ನಾನು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನನ್ನ ನಾಯಿಯನ್ನು ಶಾಂತಿಯುತವಾಗಿ ಬದುಕಲು ಬಿಡಿ ಎಂದು ಡೆತ್ ನೋಟ್ ಬರೆದಿಟ್ಟು ತಮ್ಮ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.