ಮುಂಬೈ: ಬೆಳ್ಳಂಬೆಳಗ್ಗೆ ಮುಂಬೈನ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಕುರ್ಲಾದ ನಾಯಕ್ ನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ಈವರೆಗೆ ರಕ್ಷಿಸಿದ್ದು, ಅವಶೇಷಗಳಡಿ 20-25 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸುದ್ದಿ ತಿಳಿದಾಕ್ಷಣ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಗಾಯಾಳುಗಳನ್ನು ಘಾಟ್ ಕೋಪರ್ ಮತ್ತು ಸಿಯಾನ್ ನಲ್ಲಿರುವ ನಾಗರಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕಟ್ಟಡ ದುರಂತವಾದ ಸ್ಥಳಕ್ಕೆ ಆದಿತ್ಯ ಠಾಕ್ರೆ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ, ಮುಂಬೈ ಪಾಲಿಕೆ ನೋಟಿಸ್ ನೀಡಿತ್ತು. ಆದರೆ ಕಟ್ಟಡದಲ್ಲಿದ್ದವರು ತೆರವು ಮಾಡಿರಲಿಲ್ಲ.










