ಜುಲೈ. 1ರಿಂದ ವಿದ್ಯುತ್ ದರ ಏರಿಕೆ – ಎಷ್ಟು ಹೆಚ್ಚಳ?

63
firstsuddi

ಬೆಂಗಳೂರು : ರಾಜ್ಯದಲ್ಲಿ ಜುಲೈ 1 ರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದ್ದು, ಈ ಮೂಲಕ ಜನರಿಗೆ ವಿದ್ಯುತ್ ದರ ಮತ್ತಷ್ಟು ಹೊರೆ ಆಗಲಿದೆ.

ಜುಲೈ 1 ರಿಂದ ವಿದ್ಯುತ್ ದರ 19 ರೂ.ಗಳಿಂದ 31 ರೂ.ಗೆ ಏರಿಕೆಯಾಗಲಿದೆ. ಪ್ರತಿ ತಿಂಗಳು 100 ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು 19 ರೂ.ಯಿಂದ 31 ರೂ. ಪಾವತಿಸಬೇಕು.

ಕಲ್ಲಿದ್ದಲು ದರ ಹೆಚ್ಚಳವಾದ ಹಿನ್ನೆಲೆ ಬೆಲೆ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಎಸ್ಕಾಂಗಳು ಪ್ರತಿ ಯೂನಿಟ್ ಗೆ 38 ರಿಂದ 35 ರೂ. ದರ ಹೆಚ್ಚಿಸಲು ಅನುಮತಿ ಕೋರಿದ್ದವು. ಬೆಸ್ಕಾಂ 55.28 ರೂ., ಹೆಸ್ಕಾಂ 49.54 ರೂ., ಮೆಸ್ಕಾಂ 38.98 ರೂ., ಸೆಸ್ಕ್ 40.47 ರೂ ಮತ್ತು ಗೆಸ್ಕಾಂ 39.36 ರೂ. ಹೆಚ್ಚು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು.