ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ…

209
firstsuddi

ವಿಜಯಪುರ : ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ವಿಜಯಪುರದ ಮುದನೂರು ಆಸ್ಪತ್ರೆಯಲ್ಲಿ ನಡೆದಿದೆ. ದಾಲಿಬಾಯ್ ಎಂಬ ಮಹಿಳೆ ಎರಡು ಗಂಡು ಎರಡು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಾಲಿಬಾಯ್ ಅವರಿಗೆ ಮೊದಲೇ ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಅವರಲ್ಲಿ 16 ವರ್ಷದ ಮಗ ಮೃತಪಟ್ಟಿದ್ದು, ಹೀಗಾಗಿ ದಾಲಿಬಾಯ್ ಅವರು ತನಗೆ ಗಂಡು ಮಗು ಬೇಕೆಂದು ಟೆಸ್ಟ್ಯೂಬ್ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ದಾಲಿಬಾಯ್ ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ಸದ್ಯ ತಾಯಿ-ಮಕ್ಕಳು ಆರೋಗ್ಯವಂತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.