ನಿನ್ನಂತ ಒಳ್ಳೆ ವ್ಯಕ್ತಿಯನ್ನು ಪಡೆದಿದ್ದಕ್ಕೆ ಧನ್ಯವಾದ : ಮನಸ್ತಾಪ ಮರೆತು ಒಂದಾದ ರಕ್ಷಿತಾ – ದರ್ಶನ್.

119
firstsuddi

ಬೆಂಗಳೂರು : ಇತ್ತೀಚೆಗಷ್ಟೇ ನಟ ದರ್ಶನ್ ಅವರು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಮಾತನಾಡುವ ಭರದಲ್ಲಿ ನಿರ್ದೇಶಕರನ್ನು ಪುಡಂಗಿಗಳು ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಈ ವಿಚಾರ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಅವರಿಗೆ ನೋವುಂಟು ಮಾಡಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತಾ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ ಇದೀಗ ದರ್ಶನ್ ಮತ್ತು ರಕ್ಷಿತಾ ಪ್ರೇಮ್ ನಡುವೆ ಮತ್ತೆ ಸ್ನೇಹ ಚಿಗುರಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಕ್ಷಿತಾ ಅವರು ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಜೊತೆಗಿನ ಫೋಟೋದ ಮುಂದೆ ಗಮನ ಸೆಳೆಯುವ ಕ್ಯಾಪ್ಷನ್ ಕೊಟ್ಟಿದ್ದು, ಕೆಲವೊಂದು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ. ನೀನು ಯಾವಾಗಲೂ ನನ್ನ ಜೊತೆಗೆ ಇರುತ್ತೀಯಾ ಎಂದು ನನಗೆ ಗೊತ್ತಿದೆ. ನಿನ್ನಂತ ಒಳ್ಳೆಯ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಪಡೆದಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ದರ್ಶನ್ ಗೆ ಟ್ಯಾಗ್ ಮಾಡಿದ್ದಾರೆ.