ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ…

87
firstsuddi

ರಾಯಚೂರು : ನಾರಾಯಣಪುರ(ಬಸವಸಾಗರ)ಜಲಾಶಯದಿಂದ ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಗ್ರಾಮದೊಳಗೆ ನೀರು ನುಗ್ಗುವ ಭೀತಿ ಶುರುವಾಗಿದೆ. ಅಲ್ಲದೇ ಕೊಪ್ಪರ ಗ್ರಾಮದ ಶ್ರೀನರಸಿಂಹಸ್ವಾಮಿ ದೇಗುಲ ಕೂಡ ಮುಳಗಡೆಯಾಗಿದೆ.

ಲಿಂಗಸೂಗೂರು ತಾಲ್ಲೂಕಿನ ಶೀಲಹಳ್ಳಿ, ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮುಳಗಡೆಯಾಗಿ ಬ್ರಿಡ್ಜ್ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಅಪಾರ ಪ್ರಮಾಣದ ನೀರು ಬರುತ್ತಿರುವುದರಿಂದ ತಿಂಥಣಿ ಗ್ರಾಮ ಜಲಾವೃತ ಭೀತಿಯಲ್ಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರು ಮನೆ ಖಾಲಿ ಮಾಡುತ್ತಿದ್ದಾರೆ. ಹಯ್ಯಾಳ, ಹತ್ತಿಗೂಡರು ರಸ್ತೆಯ ಮಧ್ಯದಲ್ಲಿನ ಸೇತುವೆ ಜಲಾವೃತಗೊಂಡಿದೆ.

ಪ್ರವಾಹದ ಭೀತಿ ಎದುರಿಸಲು ಜಿಲ್ಲಾಡಳಿತ ಅಗತ್ಯಕ್ರಮ ಕೈಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.