ನಿಮ್ಮ ದೇಹ ನಿಮ್ಮ ಆಸ್ತಿ ಎಂದು ಟಾಪ್‌ಲೆಸ್ ಆದ ಸಂಯುಕ್ತಾ ಹೆಗ್ಡೆ.

74
firstsuddi

ಸ್ಯಾಂಡಲ್‌ವುಡ್‌ನ ‘ಕಿರಿಕ್ ಪಾರ್ಟಿ’ಯ ಕಿರಿಕ್ ಸುಂದರಿ ಸಂಯುಕ್ತಾ ಹೆಗ್ಡೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟಾಪ್ ಲೆಸ್ ಆಗಿ ತನ್ನ ದೇಹ ಪ್ರದರ್ಶಿಸಿದ ಸಂಯುಕ್ತ, ನಿಮ್ಮ ದೇಹ ನಿಮ್ಮ ಆಸ್ತಿ ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವೀಡಿಯೊ ಶೇರ್ ಮಾಡಿ ಸಂಯುಕ್ತ ದೀರ್ಘ ಸಾಲುಗಳನ್ನು ಹಂಚಿಕೊಂಡಿದ್ದಾರೆ. ‘ನಿಮ್ಮ ದೇಹ ನಿಮ್ಮ ಆಸ್ತಿ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲೀಕತ್ವವನ್ನು ಹೊಂದಿಲ್ಲ. ಮಹಿಳೆಯರು ನಾವು ಬಲವಾದ, ಸ್ವತಂತ್ರ ಮತ್ತು ಆತ್ಮವಿಶ್ವಾಸದಿಂದ ಇರಲು ಅವಕಾಶವಿದೆ. ಶಕ್ತಿ ಎನ್ನುವುದು ಪುರುಷ ಅಥವಾ ಸ್ತ್ರಿ ಎನ್ನುವುದು ಅಲ್ಲ ಎಂದು ಬರೆದುಕೊಂಡಿದ್ದಾರೆ.

ಸಂಯುಕ್ತ ಕಳೆದ ಕೆಲವು ತಿಂಗಳ ಹಿಂದೆ ಕಾಲಿಗೆ ಏಟು ಮಾಡಿಕೊಂಡು ಫುಲ್ ಬೆಡ್ ರೆಸ್ಟ್‌ನಲ್ಲಿದ್ದರು. ಆದರೆ ಕೆಲವೇ ತಿಂಗಳಲ್ಲಿ ಚೇತರಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸುಮಾರು 5 ತಿಂಗಳುಗಳ ಕಾಲ ರೆಸ್ಟ್‌ನಲ್ಲಿದ್ದರು. ಮತ್ತೆ ಚೇತರಿಸಿಕೊಂಡಿರುವ ಸಂಯುಕ್ತ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಜೊತೆಗೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ದರು. ಜಯಂರವಿ, ಪ್ರಭುದೇವ, ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು.