ಸಾಗರ: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದೂವರೆ ಮಗು ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಿನ್ನೆ ಸಂಜೆ ನಡೆದಿದೆ.
ಇಲ್ಲಿನ ಜೋಸೆಫ್ ನಗರದಲ್ಲಿ ಮನೆಯಲ್ಲಿ ವಾಸವಿದ್ದ ಆಸಿಫ್ ಎಂಬವರ ಪುತ್ರಿ ಆನಂ ಫಾತಿಮಾ ಮೃತ ಮಗು ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ಮಗು ಆನಂ ಮನೆಯಲ್ಲಿನ ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್ ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.