ಚಿಕ್ಕಮಗಳೂರು: ನಗರದ ಶ್ರೀ ಕಾಮಧೇನು ಗಣಪತಿ ಕ್ಷೇತ್ರದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ನೂರಾರು ಭಕ್ತರ ನಡುವೆ ಇಂದು ವೈಭವದಿಂದ ನಡೆಯಿತು.
ಬ್ರಹ್ಮರಥೋತ್ಸವದ ಪ್ರಯುಕ್ತ ಕ್ಷೇತ್ರದ ಅಧಿದೇವತೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಶ್ರೀ ಗಣಪತಿ ಹೋಮ, ಮಾರುತಿ ಹೋಮ, ನವಗ್ರಹ ಹೋಮ, ದುರ್ಗಾ ಹೋಮ ಜರುಗಿದವು.
ಹೋಮದ ಪೂರ್ಣಹುತಿಯ ನಂತರ ಕ್ಷೇತ್ರದ ಆವರಣದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಬ್ರಹ್ಮರಥದಲ್ಲಿ ಶ್ರೀ ಕಾಮಧೇನು ಗಣಪತಿ ಸೇರಿದಂತೆ ಅದಿದೇವತೆಗಳ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ಭಕ್ತರ ಹರ್ಷೋದ್ಗಾರಗಳ ನಡುವೆ ಬ್ರಹ್ಮರಥವನ್ನು ಎಳೆಯಲಾಯಿತು ಪ್ರಧಾನ ಅರ್ಚಕ ರಘುನಾಥ ಅವಧಾನಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಇದೇ ವೇಳೆ ಸಾಯಿ ಸತೀಶ್ ತಂಡದಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು ಬ್ರಹ್ಮರಥೋತ್ಸವದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.










