ನೇಣು ಬಿಗಿದುಕೊಂಡು ಐಐಟಿ ದೆಹಲಿ ವಿದ್ಯಾರ್ಥಿ ಆತ್ಮಹತ್ಯೆ…

67
firstsuddi

ನವದೆಹಲಿ: ವೇಯ್ಟ್ ಲಿಫ್ಟಿಂಗ್ ರಾಡ್​ಗೆ ನೇಣು ಬಿಗಿದುಕೊಂಡು ಐಐಟಿ ದೆಹಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿ ಪಣವ್ ಜೈನ್ ಮೃತದೇಹ, ಪೋಷಕರು ರಾತ್ರಿ ವಾಕಿಂಗ್ ಮುಗಿಸಿ ಹಿಂದಿರುಗಿದಾಗ ಪತ್ತೆಯಾಗಿದೆ. ಪಣವ್, ವಿವೇಕ್ ವಿಹಾರದಲ್ಲಿರುವ ತಮ್ಮ ಮನೆಯಲ್ಲಿ ಅಳವಡಿಸಲಾಗಿದ್ದ ಭಾರ ಎತ್ತುವ ರಾಡ್‌ನಲ್ಲಿ ದುಪಟ್ಟಾ (ಸ್ಕಾರ್ಫ್) ದಿಂದ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣವ್ ಅವರ ತಂದೆ, ತಮ್ಮ ಮಗ ಕಳೆದ ಕೆಲವು ತಿಂಗಳುಗಳಿಂದ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾನೆ ಮತ್ತು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ.

ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.