ನೈಸ್ ರಸ್ತೆಯ ಟೋಲ್ ದರ ಹೆಚ್ಚಳ ತಾತ್ಕಾಲಿಕ ಸ್ಥಗಿತ…

60
firstsuddi

ಬೆಂಗಳೂರು : ನೈಸ್ ರಸ್ತೆಯ ಟೋಲ್ ದರ ಹೆಚ್ಚಳ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜುಲೈ 1(ನಾಳೆ)ರಿಂದ ಶುಲ್ಕ ಹೆಚ್ಚಳ ಮಾಡುವುದಾಗಿ ನೈಸ್ ಟೋಲ್ ಕಂಪನಿ ಹೇಳಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಕಾರಣದಿಂದ ಶುಲ್ಕ ಏರಿಕೆಯನ್ನ ವಾಪಸ್ ಪಡೆಯಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಆದರೆ ಟೋಲ್ ದರ ಮುಂದಿನ ವಾರದಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ಸಂಚರಿಸುವ ಬೈಕ್ ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ 45 ರೂ., ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ಕಾರ್ ಗಳಿಗೆ 35, ಬೈಕ್ ಗಳಿಗೆ 12 ರೂ., ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ಸಂಚರಿಸುವ ಕಾರ್ ಗಳಿಗೆ 25ರೂ., ಬೈಕ್ ಗಳ ಟೋಲ್ ದರ 8 ರೂ.ಗೆ ಹೆಚ್ಚಳ ಮಾಡುವುದಾಗಿ ನೈಸ್ ಸಂಸ್ಥೆ ತಿಳಿಸಿತ್ತು.