ನ.15ರಂದು ದೆಹಲಿಯಲ್ಲಿ ಕನ್ನಡ ಗೀತೆಗಳ ಗಾನಸುದೆಯನ್ನು ಹರಿಸಲಿರುವ ಮಲ್ಲಿಗೆ ಸುಧೀರ್.

67
firstsuddi

ಚಿಕ್ಕಮಗಳೂರು: ನಗರದ ಯುವ ಪ್ರತಿಭೆ, ಗಾಯಕ ಮಲ್ಲಿಗೆ ಸುಧೀರ್ ಅವರು ನ.15ರಂದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕನ್ನಡ ಗೀತೆಗಳ ಗಾನಸುದೆಯನ್ನು ಹರಿಸಲಿದ್ದಾರೆ.

ಅಂದು ದೆಹಲಿಯ ಸತ್ಯಸಾಯಿ ಸಭಾಂಗಣದಲ್ಲಿ ನಡೆಯಲಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಪ್ರಸಿದ್ಧ ಕವಿಗಳ ಗೀತೆಗಳನ್ನು ಡಾ.ಸಿ. ಅಶ್ವಥ್ ಅವರು ಹಾಡಿರುವ ಗೀತೆಗಳು ಮತ್ತು ಸಂತ ಶಿಶುನಾಳ ಶರೀಫರ ತತ್ವಪದಗಳ ರಸದೌತಣವನ್ನು ತಮ್ಮ ಕಂಚಿನ ಕಂಠದ ಮೂಲಕ ಉಣಬಡಿಸಲಿದ್ದಾರೆ.