ಲಖನೌ : ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗಕ್ಕೆ ಸುಟ್ಟು ಚಿತ್ರ ಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ.
ಇವರು ಎರಡು ವರ್ಷಗಳ ಹಿಂದೆ ಪ್ರೇಮ ವಿವಾಹ ಹಾಗಿದ್ದರೂ ಎನ್ನಲಾಗಿದ್ದು ಬಳಿಕ ದಿನನಿತ್ಯ ಪತಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು ಎಂದು ಪತಿ ಹೇಳಿಕೊಂಡಿದ್ದು. ಈ ಘಟನೆ ಸಿಯೋಹಾರ ಎಂಬಲ್ಲಿ ತನ್ನ ಗಂಡನ ಕೈ ಕಾಲು ಕಟ್ಟಿ, ಕತ್ತು ಹಿಸುಕಿ ಮರ್ಮಾಂಗಕ್ಕೆ ಸಿಗರೇಟ್ ನಿಂದ ಸುಡುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ನಿಯನ್ನು ಜೈಲಿಗೆ ಕಳಿಸಿದ್ದಾರೆ.