ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿ!

73
firstsuddi

ರಾಮನಗರ : ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅರಳಿಮರದ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮಂಗಳಗೌರಿ (29) ಮೃತ ಮಹಿಳೆ. ಸತೀಶ್ ಹತ್ಯೆಗೈದ ಆರೋಪಿ. ಈತ ರಾಮನಗರ ತಾಲೂಕಿನ ಆನಮಾನಹಳ್ಳಿ ನಿವಾಸಿ. ದಂಪತಿ ಪ್ರತಿ ದಿನ ಜಗಳವಾಡುತ್ತಿದ್ದರಂತೆ. ಇತ್ತೀಚೆಗೆ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮಂಗಳ ಗೌರಿ ತಮ್ಮ ಅಕ್ಕನ ಮನೆಯಿರುವ ಅರಳೀಮರದದೊಡ್ಡಿ ಗ್ರಾಮಕ್ಕೆ ಬಂದಿದ್ದಳಂತೆ. ನಿನ್ನೆ ಕೆಲಸ ಮುಗಿಸಿಕೊಂಡು ಅಕ್ಕನ ಮನೆಗೆ ಹೋಗುವಾಗ ಸತೀಶ್ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.

ಆರೋಪಿ ಸತೀಶ್ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.