ಮುಂಬೈ : ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹ ಜೀವನಕ್ಕೆ ಕಾಲಿರಿಸಿ ಇಂದಿಗೆ ನಾಲ್ಕು ವರ್ಷದ ಸಂಭ್ರಮ. ಸದ್ಯ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿರುವ ವಿರುಷ್ಕಾ ದಂಪತಿಗೆ ಹಲವಾರು ಸೆಲೆಬ್ರೆಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ವಿರುಷ್ಕಾ ಜೋಡಿಯು 2017 ಡಿಸೆಂಬರ್ 11ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಜನವರಿ 11 ರಂದು 2021ರಂದು ಹೆಣ್ಣು ಮಗು ಜನಿಸಿದ್ದು, ಅದಕ್ಕೆ ವಮಿಕಾ ಎಂದು ನಾಮಕರಣ ಮಾಡಿದ್ದಾರೆ. ಆದರೆ ಇದುವರೆಗೂ ತಮ್ಮ ಮಗುವಿನ ಮುಖ ಕಾಣುವ ಒಂದೂ ಫೋಟೋವನ್ನು ಸಹ ಹಂಚಿಕೊಂಡಿಲ್ಲ.

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿರುಷ್ಕಾ ದಂಪತಿ ಅನೇಕ ಮಂದಿಗೆ ಮಾದರಿಯಾಗಿದ್ದಾರೆ.










