ಅಮರಾವತಿ : ತಿರುಪತಿ ತಿಮ್ಮಪ್ಪನಿಗೆ ಅನಾಮಧೇಯ ಭಕ್ತರೊಬ್ಬರು ತಿರುಪತಿ ದೇವರಿಗೆ 3 ಕೋಟಿ ರೂ. ಬೆಲೆ ಬಾಳುವ ವಜ್ರ ಮತ್ತು ಚಿನ್ನದಿಂದ ಮಾಡಲಾದ ಕೈಗವಸುಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಈ ಚಿನ್ನದ ಕೈಗವಸುಗಳು ಸುಮಾರು 5 ಕೆ.ಜಿ ತೂಕವಿದ್ದು, ತಿರುಮಲ ತಿರುಪತಿ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ. ತಿರಮಲದಲ್ಲೇ ನೆಲೆಸಿರುವ ಕುಟುಂಬವು ಈ ಚಿನ್ನಾಭರಣಗಳನ್ನು ನೀಡಿದೆ ಎನ್ನಲಾಗಿದ್ದು, ಭಕ್ತರು ಯಾರೆಂಬುದನ್ನು ಗೌಪ್ಯವಾಗಿಡಲಾಗಿದೆ.










