ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ರಾತ್ರಿ ಇಡೀ ಶವದ ಪಕ್ಕದಲ್ಲೇ ಮಲಗಿದ ಪತಿ…

307
firstsuddi

ಬಳ್ಳಾರಿ : ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಪತಿ ರಾತ್ರಿ ಇಡೀ ಪತ್ನಿಯ ಶವದ ಪಕ್ಕದಲ್ಲೇ ಮಲಗಿರುವ ಘಟನೆ ಜಿಲ್ಲೆಯ ಹಡಗಲಿ ತಾಲ್ಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ. ಜ್ಯೋತಿ(40) ಕೊಲೆಯಾದ ಪತ್ನಿ ಎಂದು ಗುರುತಿಸಲಾಗಿದ್ದು, ಪತಿ ವ್ಯಾಚ್ಯಾ ನಾಯ್ಕ್ ಅವರು ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಅದರಂತೆ ನಿನ್ನೆ ರಾತ್ರಿ ಕುಡಿದು ಬಂದ ಪತಿಯೊಂದಿಗೆ ಪತ್ನಿ ಜ್ಯೋತಿ ಜಗಳವಾಡಿದ್ದು, ಇದರಿಂದ ಕೋಪಗೊಂಡ ಪತಿ ನಿನ್ನೆ ತಡರಾತ್ರಿ ತನ್ನ ಪತ್ನಿಯ ಕುತ್ತಿಗೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ತನಗೆ ಅರಿವೇ ಇಲ್ಲದ ಹಾಗೆ ರಾತ್ರಿ ಇಡೀ ಪತ್ನಿ ಶವದ ಜೊತೆಗೆ ಮಲಗಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.