ಪತ್ನಿ, ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಪೊಲೀಸ್ ಹೆಡ್​ ಕಾನ್​ಸ್ಟೆಬಲ್.

66
firstsuddi

ಆಂಧ್ರಪ್ರದೇಶ: ಪೊಲೀಸ್ ಹೆಡ್​ ಕಾನ್​ಸ್ಟೆಬಲ್ ವೊಬ್ಬರು ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಕಡಪಾ ನಗರದಲ್ಲಿ ನಡೆದಿದೆ.

55 ವರ್ಷದ ಆಂಧ್ರಪ್ರದೇಶ ಪೊಲೀಸ್ ಹೆಡ್​ ಕಾನ್​ಸ್ಟೆಬಲ್ ವೆಂಕಟೇಶ್ವರಲು, 45 ವರ್ಷದ ತನ್ನ ಪತ್ನಿ ಮತ್ತು 20 ವರ್ಷದ ಹಿರಿಯ ಮಗಳು ಹಾಗೂ 16 ವರ್ಷದ ಕಿರಿಯ ಮಗಳ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 1993ನೇ ಬ್ಯಾಚ್​ನ ಪೊಲೀಸ್ ಅಧಿಕಾರಿ ಮನೆಯಿಂದ ಡೆತ್ ನೋಟ್ ವಶಪಡಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಹೆಡ್​ ಕಾನ್​ಸ್ಟೆಬಲ್ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಹಣವನ್ನು ಕಳೆದುಕೊಂಡಿದ್ದರು ಮತ್ತು ಕೆಲವು ಕೌಟುಂಬಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು ಎಂದು ಹೇಳಲಾಗಿದೆ.

ವೆಂಕಟೇಶ್ವರಲು ಮನೆಗೆ ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಕೌಶಲ್ ಭೇಟಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.