ಹುಬ್ಬಳ್ಳಿ: ಪತಿಯೊಬ್ಬ ತನ್ನ ಪತ್ನಿಯ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಆನಂದನಗರದ ಬ್ಯಾಹಟ್ಟಿ ಪ್ಲಾಟ್ನಲ್ಲಿ ನಡೆದಿದೆ.
ಮಂಜುಳಾ ಮೃತ ದುರ್ದೈವಿ. ಪತಿ ಭೀಮಪ್ಪ ಮುತ್ತಲಗಿ ಕೊಲೆ ಆರೋಪಿ. ಭೀಮಪ್ಪ ಮುತ್ತಲಗಿ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಕುರಿತಂತೆ ಘಟನಾ ಸ್ಥಳಕ್ಕೆ ದಕ್ಷಿಣ ಉಪ ವಿಭಾಗದ ಎಸಿಪಿ ಆರ್.ಕೆ. ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನಾ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










