ಪಬ್-ಜಿ ಆ್ಯಪ್ ಗೆ ಪರ್ಯಾಯವಾಗಿ ಭಾರತದಿಂದ “ಫೌ-ಜಿ” ಆ್ಯಪ್…

174
fistsuddi

ನವದೆಹಲಿ : ಗಾಲ್ವಾನ್ ಗಡಿಯಲ್ಲಿ ಚೀನಾ-ಭಾರತ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾದ ಆ್ಯಪ್ ಗಳನ್ನು ನಿಷೇಧಿಸುತ್ತಲೇ ಬಂದಿದ್ದು, ಕಳೆದ 2 ದಿನಗಳ ಹಿಂದೆ ನಿಷೇಧಿಸಲಾಗಿದ್ದ ಪಬ್‍ಜಿ ಗೇಮಿಂಗ್ ಆ್ಯಪ್ ಗೆ ಪರ್ಯಾಯವಾಗಿ ಭಾರತದಲ್ಲಿ “ಫೌ-ಜಿ” ಎಂಬ ಆ್ಯಪ್ ಬಿಡುಗಡೆಯಾಗಲಿದ್ದು, ಇದನ್ನು ಟ್ವಿಟರ್ ಮೂಲಕ ಪ್ರಚಾರ ಮಾಡುವ ಸಲುವಾಗಿ ನಟ ಅಕ್ಷಯ್ ಕುಮಾರ್ ಹಾಗೂ ಭಾರತೀಯ ಗೇಮಿಂಗ್ ಜಗತ್ತಿನ ಮುತ್ಸದಿ ವಿಶಾಲ್ ಗೊಂಡಲ್ ಅವರು ಮುಂದಾಗಿದ್ದಾರೆ. ಈ ಗೇಮಿಂಗ್ ಆ್ಯಪ್ ಅನ್ನು ಬೆಂಗಳೂರು ಮೂಲದ ಎನ್ ಕೋರ್ ಗೇಮ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವಿಟರ್ ಮೂಲಕ ಫೌ-ಜಿ ಆ್ಯಪ್ ಅನ್ನು ಪ್ರಚಾರ ಮಾಡಲು ಮುಂದಾಗಿದ್ದು, ಟ್ವಿಟರ್‍ನಲ್ಲಿ ಗೇಮ್‍ನ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಫೌ-ಜಿ ಆ್ಯಪ್ ಬಿಡುಗಡೆಯ ದಿನಾಂಕವನ್ನು ಇನ್ನು ಪ್ರಕಟಿಸಿಲ್ಲ.