ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ, ರಾಶಿ ರಾಶಿ ಮಾರಾಕಾಸ್ತ್ರಗಳು ಪತ್ತೆ…

247
firstsuddi

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾಶಿ ರಾಶಿ ಮಾರಕಾಸ್ತ್ರಗಳು, ಖೈದಿಗಳ ಬಳಿ ಇದ್ದ ಮೊಬೈಲ್‍ಗಳು ಹಾಗೂ ಸಿಮ್ ಕಾರ್ಡ್‍ಗಳು ಪತ್ತೆಯಾಗಿದೆ. ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ರಾಶಿ ರಾಶಿ ಮೊಬೈಲ್ ಫೋನ್‍ಗಳು, ಸಿಮ್ ಕಾರ್ಡ್‍ಗಳು, ಮಾರಕಾಸ್ತ್ರಗಳು ಹಾಗೂ ಗಾಂಜ ಸೇದಲು ಬಳಸುವ ಪೈಪ್‍ಗಳು ಕೂಡಾ ಪತ್ತೆಯಾಗಿದ್ದು, ಜೈಲಿನಲ್ಲಿ ಸಿಕ್ಕಿರುವ ಮಾರಾಕಾಸ್ತ್ರಗಳನ್ನು ಜೈಲಿನಲ್ಲಿ ಇರುವ ತಟ್ಟೆ, ಚಮಚ ಸೇರಿದಂತೆ ವಿವಿಧ ವಸ್ತುಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗಿದೆ ಎನ್ನಲಾಗಿದೆ.