ಪರೀಕ್ಷೆಯಲ್ಲಿ ನಕಲು ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ : ವಿದ್ಯಾರ್ಥಿಗಳಿಗೆ ಮೋದಿ ಸಲಹೆ…

21
firstsuddi

ನವದೆಹಲಿ : ಒಂದೋ, ಎರಡೋ ಪರೀಕ್ಷೆಯಲ್ಲಿ ನಕಲು ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಕಲು ಮಾಡುತ್ತಾ ಮುಂದೆ ಹೋದರೂ ಮುಂದೆ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತೆ ಯಾರಾದರೂ ಮೋಸ ಮಾಡಿ ನಿಮಗಿಂತ ಸ್ವಲ್ಪ ಹೆಚ್ಚು ಅಂಕ ಪಡೆದರೂ ಅದು ನಿಮಗೆ ಜೀವನದಲ್ಲಿ ಅಡ್ಡಿಯಾಗಲಾರದು ನಿಮ್ಮ ಆಂತರಿಕ ಶಕ್ತಿಯನ್ನು ನಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಆರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜೊತೆಗೆ ಸಂವಾದ ನಡೆಸಿ ಹಲವು ಸಲಹೆಗಳನ್ನು ನೀಡಿದರು. ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಮೋದಿ, ಪೋಷಕರು ಮಕ್ಕಳ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಇದು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಇರಬೇಕು. ಅದನ್ನು ಮೀರಿ ನಿರೀಕ್ಷೆ ಹೊಂದುವುದು ದೊಡ್ಡ ಸಮಸ್ಯೆಯಾಗಿದೆ. ಪೋಷಕರು ಒತ್ತಡ ಹಾಕದಿದ್ದರೂ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯಲ್ಲಿ ಮುನ್ನುಗ್ಗಿ ಯಾವತ್ತು ಧೈರ್ಯ ಕಳೆದುಕೊಳ್ಳಬೇಡಿ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಸ್ಮಾರ್ಟ್ ವರ್ಕ್ ಮತ್ತು ಹಾರ್ಡ್ ವರ್ಕ್ ನಡುವೆ ಯಾವುದನ್ನು ಆಯ್ಕೆ ಮಾಡಬೇಕು? ಎನ್ನುವ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಮೋದಿ, ಬಾಯಾರಿದ ಕಾಗೆಯ ಕಥೆಯನ್ನು ನೀವೆಲ್ಲರೂ ಕೇಳಿರಬೇಕು, ಅದರಲ್ಲಿ ಕಾಗೆಯು ಕಲ್ಲುಹಾಕಿ ನೀರು ಕುಡಿಯುತ್ತದೆ ಇದು ಕಾಗೆಯ ಹಾರ್ಡ್ ವರ್ಕ್ ಅಥವಾ ಸ್ಮಾರ್ಟ್ ವರ್ಕ್? ಕೆಲವರು ಹಾರ್ಡ್‍ಲಿ ಸ್ಮಾರ್ಟ್ ವರ್ಕ್ ಮಾಡಿದರೆ ಕೆಲವರು ಸ್ಮಾರ್ಟ್‍ಲಿ ಹಾರ್ಡ್ ವರ್ಕ್ ಮಾಡುತ್ತಾರೆ ಕಾಗೆಗಳಿಂದ ನಾವು ಕಲಿಯಬೇಕಾದುದು ಇದನ್ನೇ. ಒಮ್ಮೆ ಕಾರು ಕೆಟ್ಟು ನಿಂತಿತ್ತು ಗಂಟೆಗಟ್ಟಲೆ ತಳ್ಳಿದರೂ ವಾಹನ ಸ್ಟಾರ್ಟ್ ಆಗಲಿಲ್ಲ 2 ನಿಮಿಷದಲ್ಲಿ ಕಾರನ್ನು ಮೆಕಾನಿಕ್ ಸರಿಪಡಿಸಿದ ಕಾರು ಸರಿಪಡಿಸಿ ಮೆಕಾನಿಕ್ 200 ರೂ.ಗೆ ಬೇಡಿಕೆ ಇಟ್ಟ 2 ನಿಮಿಷದ ಕೆಲಸಕ್ಕೆ 200 ರೂಪಾಯಿ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು ಅದಕ್ಕೆ 200 ರೂ. 2 ನಿಮಿಷಕ್ಕೆ ಅಲ್ಲ 20 ವರ್ಷಗಳ ಅನುಭವಕ್ಕೆ ಎಂದು ಮೆಕ್ಯಾನಿಕ್ ಹೇಳಿದ ಎಂದು ಉದಾಹರಣೆ ನೀಡಿದರು.

ಈ ಬಾರಿಯ ಪರೀಕ್ಷಾ ಪೇ ಚರ್ಚೆಯಲ್ಲಿ 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಮತ್ತು 1.95 ಲಕ್ಷ ಪೋಷಕರು ಸೇರಿದಂತೆ ಒಟ್ಟು 38.80 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಕಳೆದ ವರ್ಷ, ಸುಮಾರು 15.7 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.