ಪಶ್ಚಿಮ ಬಂಗಾಳ ಚುನಾವಣೆ ; ಕೋಟಿ ಒಡೆಯನನ್ನು ಸೋಲಿಸಿದ ಕೂಲಿ ಕಾರ್ಮಿಕನ ಪತ್ನಿ..!

146
firstsuddi

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಸಲ್ತೋರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೂಲಿ ಕಾರ್ಮಿಕನ ಪತ್ನಿ ಚಂದನಾ ಬೌರಿ ಅವರು ಕೋಟಿ ಒಡೆಯನನ್ನು ಸೋಲಿಸಿ ಚುನಾವಣಾ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಒಟ್ಟು 91,648 ಮತಗಳನ್ನು ಪಡೆದ ಚಂದನಾ ಬೌರಿ ಅವರು 87,503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4, 145 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

10ನೇ ತರಗತಿ ಪಾಸ್ ಮಾಡಿರುವ 30 ವರ್ಷದ ಚಂದನಾ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಇವರ ಬ್ಯಾಂಕ್ ಖಾತೆಯಲ್ಲಿ 31 ಸಾವಿರ 985 ರೂ ಮಾತ್ರ ಇದೆ. ಇವರ ಪತಿ ದಿನಗೂಲಿ ಕೆಲಸಗಾರನಾಗಿದ್ದು, ಮೂರು ಮಕ್ಕಳಿದ್ದಾರೆ. ಸಾಲ್ಟೋರಾ ಮೀಸಲು ಕ್ಷೇತ್ರ ಆಗಿದ್ದ ಕಾರಣ ಬಿಜೆಪಿ ಪಕ್ಷದಿಂದ ಕಣಕ್ಕಿಳಿದು ಇದೀಗ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಚಂದನಾ ಅವರ ಗೆಲುವಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.