ಚಿಕ್ಕಬಳ್ಳಾಪುರ : ಮಾಸ್ಕ್ ಧರಿಸಿ ಎಂದಿದ್ದಕ್ಕೆ ಮಹಿಳಾ ಪಿಡಿಓ ಹಾಗೂ ಆಕೆಯ ಪತಿಯ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಭಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಅವರ ಮೇಲೆ ಶೆಟ್ಟಿಹಳ್ಳಿ ಗ್ರಾಮದ ನವೀನ್ ಹಾಗೂ ಮನೋಹ್ ಹಲ್ಲೆ ಮಾಡಿದ ಯವಕರು. ಮಾಸ್ಕ್ ಹಾಕದೆ, ಸಾಮಾಜಿಕ ಅಂತರವಿಲ್ಲದೆ ಮಾತನಾಡುತ್ತಿದ್ದು ಕಂಡು ಮಾಸ್ಕ್ ಹಾಕಿ ಅಂತ ಪಿಡಿಓ ಹೇಳಿದ್ದಾರೆ. ಈ ವೇಳೆ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ. ಅಲ್ಲದೇ ಇಬ್ಬರು ಯವಕರು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಡಿಓ ಭಾಗ್ಯಮ್ಮ ದೂರು ದಾಖಲಿಸಿದ್ದಾರೆ.










