ಪಾಕಿಸ್ತಾನ ಪ್ರಧಾನಿಯ ಮೊಮ್ಮಗಳ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದಿದ್ದು ಕಾಂಗ್ರೆಸ್ ಪ್ರಧಾನಿಯಲ್ಲ, ಬಿಜೆಪಿ ಪ್ರಧಾನಿ : ಯು.ಟಿ. ಖಾದರ್ ವಾಗ್ದಾಳಿ…

409
firstsuddi

ಕಾರವಾರ : ಪಾಕಿಸ್ತಾನ ಪ್ರಧಾನಿಯ ಮೊಮ್ಮಗಳ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದಿದ್ದು ಕಾಂಗ್ರೆಸ್ ಪ್ರಧಾನಿಯಲ್ಲ, ಬಿಜೆಪಿ ಪ್ರಧಾನಿ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಮತ ಕೇಳುವ ದುಸ್ಥಿತಿಗೆ ಬಿಜೆಪಿ ಹಾಗೂ ಸಂಸದರು ಬಂದಿದ್ದಾರೆ. ಪಾಕಿಸ್ತಾನ ಪ್ರಧಾನಿಯವರ ಮೊಮ್ಮಗಳ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಕಾಂಗ್ರೆಸ್ ಪ್ರಧಾನಿಯಲ್ಲ, ಬಿಜೆಪಿ ಪ್ರಧಾನಿ. ರಾತ್ರಿ ಹಗಲು ಎನ್ನದೆ ಬಿಜೆಪಿಗೆ ಪಾಕಿಸ್ತಾನದ ಚಿಮತೆಯೇ ಹೊರತು ರಾಜ್ಯದ ಅಭಿವೃದ್ದಿ ಬಗ್ಗೆ ಆಲೋಚನೆಯಿಲ್ಲ. ಚುನಾವಣೆ ಬಂದಾಗ ಪಾಕಿಸ್ತಾನವನ್ನು ಕಿಸೆಯಲ್ಲಿ ಇಟ್ಟುಕೊಂಡು ಅದರ ಬಗ್ಗೆ ಮಾತನಾಡುವ ಇವರಿಗೆ ಪಾಕಿಸ್ತಾನದ ಮೇಲೆ ಅತಿ ಹೆಚ್ಚು ಪ್ರೀತಿ. ಅಂಬೇಡ್ಕರ್ ಅವರನ್ನು ನಿಂದಿಸುವ ಇವರಿಗೆ ಪಾರ್ಲಿಮೆಂಟ್‍ನಲ್ಲಿ ಮಾತನಾಡುವ ಧೈರ್ಯ ಇಲ್ಲ. ಬೆಂಕಿ ಹಚ್ಚುವ ಕೆಲಸವನ್ನು ಬಿಟ್ಟು ಜನರ ಬಗ್ಗೆ ಮಾತನಾಡಲಿ ಎಂದು ಕಿಡಿಕಾರಿದರು.