ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಮನೆಯಲ್ಲಿ ಕಳ್ಳತನ…

20
firstsuddi

ನವದೆಹಲಿ : ಪಾಕ್ ಆಲ್‌ರೌಂಡರ್ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಅವರ ಲಾಹೋರ್ ನಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ.

ವರದಿಯ ಪ್ರಕಾರ, ಕಳ್ಳರು ಮನೆಗೆ ನುಗ್ಗಿ 20,000 ಯುಎಸ್ ಡಾಲರ್ ಹಣವನ್ನು ಕದ್ದಿದ್ದಾರೆ. ಘಟನೆ ವೇಳೆ ಹಫೀಜ್ ಹಾಗೂ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹಫೀಜ್ ಪತ್ನಿಯ ಚಿಕ್ಕಪ್ಪ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಎಸ್ಎಚ್ಒ ರಕ್ಷಣಾ ಪೊಲೀಸ್ ಮತ್ತು ವಿಧಿ ವಿಜ್ಞಾನ ಸಂಸ್ಥೆ ತಂಡವು ಕ್ರಿಕೆಟಿಗನ ಮನೆಗೆ ತೆರಳಿ ತನಿಖೆ ನಡೆಸಿತು.

ಹಫೀಜ್ ಪ್ರಸ್ತುತ ಪಾಕಿಸ್ತಾನ್ ಸೂಪರ್ ಲೀಗ್ ನ 8ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಾರೆ. ಲಾಹೋರ್ ಖಲಂದರ್ಸ್ ನ ಪಿಎಸ್ಎಲ್ 2022ರ ಟ್ರೋಫಿ ಜಯಿಸುವಲ್ಲಿ ಹಫೀಜ್ ಪ್ರಮುಖ ಪಾತ್ರವಹಿಸಿದ್ದರು.