ಪಾಕ್-ಭಾರತೀಯ ಯೋಧರ ನಡುವೆ ಗುಂಡಿನ ದಾಳಿ-ಐವರು ಪಾಕ್ ಯೋಧರ ಹತ್ಯೆ…

138
firstsuddi

ಶ್ರೀನಗರ : ಭಾರತೀಯ ಯೋಧರು ಹಾಗೂ ಪಾಕ್ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಭಾರತೀಯ ಯೋಧರು ಐವರು ಪಾಕ್ ಯೋಧರನ್ನು ಹೊಡೆದುರುಳಿಸಿದ್ದಾರೆ. ಜಮ್ಮು ಕಾಶ್ಮೀರಾದ ಪೂಂಚ್ ಜಿಲ್ಲೆಯ ಎಲ್‍ಒಸಿ ಉದ್ದಕ್ಕೂ ಪಾಕ್ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದರು. ಕೂಡಲೇ ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಯೋಧರು ಹಾಗೂ ಪಾಕ್ ಯೋಧರ ನಡುವೆ ಸುಮಾರು 2 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಈ ದಾಳಿಯಲ್ಲಿ ಐವರು ಪಾಕ್ ಯೋಧರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅಲ್ಲದೇ ಪಾಕ್ ಯೋಧರ ಬಂಕರ್ ಗಳನ್ನು ನಾಶಪಡಿಸಿದ್ದಾರೆ. ಪಾಕ್ ಯೋಧರು ನಡೆಸಿದ ಗುಂಡಿನ ದಾಳಿ ಹಾಗೂ ಶೆಲ್ ದಾಳಿಯಿಂದ ನಾಗರೀಕರ ಆಸ್ತಿಗೆ ಹಾನಿಯುಂಟಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.