ಪಾಕ್ ಸೇನೆ ಹಾರಿಸಿದ್ದ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ…

549
firstsuddi

ಶ್ರೀನಗರ : ಜಮ್ಮು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೈನಿಕರು ಹಾರಿಸಿದ್ದ 9 120ಎಂಎಂನ ಜೀವಂತ ಮಾರ್ಟರ್ ಶೆಲ್‍ಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಪಾಕಿಸ್ತಾನ ಸೇನೆ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಹೀಗಾಗಿ ಗಡಿ ನಿಯಂತ್ರಣ ರೇಖೆ ಬಳಿ ಮಾರ್ಟರ್ ಶೆಲ್‍ಗಳನ್ನು ಪಾಕ್ ಸೇನೆ ಹಾರಿಸಿತ್ತು. ಮೆಂಧರ್ ವಲಯದ ಸ್ಯಾಂಡೋಟೆ, ಬಾಸೋನಿ ಮತ್ತು ಬಾಲಕೋಟ್ ಗ್ರಾಮಗಳ ಬಳಿ 120 ಎಂಎಂ ಮತ್ತು 81 ಎಂಎಂನ 9 ಮಾರ್ಟರ್ ಶೆಲ್‍ಗಳು ಕಂಡು ಬಂದಿದ್ದು, ಭಾರತೀಯ ಸೈನಿಕರು ಅವುಗಳನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ್ದಾರೆ.