ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡು ನರಳಾಡಿದ ಮೂರು ವರ್ಷದ ಮಗು…

182
firstsuddi

ಜೈಪುರ : ಪಾತ್ರೆಯೊಳಗೆ ಮೂರು ವರ್ಷದ ಮಗುವಿನ ತಲೆ ಸಿಲುಕಿಕೊಂಡು ನರಳಾಡಿರುವ ಘಟನೆ ರಾಜಸ್ಥಾನದ ಜಾಲೋರ್ ಎಂಬ ಗ್ರಾಮದಲ್ಲಿ ನಡೆದಿದೆ. ಮಗು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಪಾತ್ರೆಯೊಳಗೆ ತಲೆ ಹಾಕಿದೆ. ಆದರೆ ಪಾತ್ರೆಯೊಳಗಿಂದ ತಲೆಯನ್ನು ವಾಪಾಸ್ ತೆಗೆಯಲು ಆಗದೇ ಒಂದೇ ಸಮನೆ ಅಳುತ್ತಿತ್ತು. ಮಗು ಅಳುತ್ತಿದ್ದನ್ನು ನೋಡಿದ ತಾಯಿ ವಿಷಯ ತಿಳಿದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ನೆರವಿಗೆ ಧಾವಿಸಿದ ಗ್ರಾಮಸ್ಥರು ಪಾತ್ರೆಯನ್ನು ಅರ್ಧಗಂಟೆಗೂ ಹೆಚ್ಚು ಕಾಲ ನಿಧಾನವಾಗಿ ಕತ್ತರಿಸಿ ಮಗುವನ್ನು ರಕ್ಷಿಸಿದ್ದಾರೆ.