ಪುಣೆಯ ವಿದುಷಿ ನಂದಿನಿರಾವ್ ಗುಜರ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

679
firstsuddi

ಚಿಕ್ಕಮಗಳೂರು -ಸಾಂಸ್ಕøತಿಕ ಸಂಘದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ಪುಣೆಯ ವಿದುಷಿ ನಂದಿನಿರಾವ್ ಗುಜರ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಮಾತೆ ಮಲಯ ಧ್ವಜ ಸಂಜಾತೆ ವರ್ಣದೊಂದಿಗೆ ಗಾನ ಯಾನವನ್ನು ಆರಂಭಿಸಿದ ಅಂತರಾಷ್ಟ್ರೀಯ ಖ್ಯಾತಿಯ ಯುವ ಗಾಯಕಿ ನಂದಿನಿ ತಮ್ಮ ಕಂಚಿನ ಕಂಠದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಹಂಸಧ್ವನಿ ರಾಗದ ವಾತಾಪಿಗಣಪತಿಂ ಭಜೇ, ತ್ಯಾಗರಾಜರ ಜಗನ್ಮೋಹಿನಿ ರಾಗದ ಶೋಬಿಲ್ಲು ಸಪ್ತಸ್ವರ, ಪುರಂದರದಾಸರ ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆ ಬರಲಿ, ಷಣ್ಮುಖ ಪ್ರಿಯರಾಗದ ತಿರುಪ್ಪಾವೈ, ಗೋಪಾಲದಾಸರ ಕಮಲಮುಖಿಯೇ ಕಮಲಾಲಯೇ ಕಮಲೇ ಕಮಲಾಕ್ಷಿಯೇ ಕೃತಿಗಳನ್ನು ಹಾಡುವ ಮೂಲಕ ಗಮನ ಸೆಳೆದರು.

ಶಿವರಂಜನಿ ರಾಗದ ಯಮನೆಲ್ಲಿ ಕಾಣನೆಂದು ಹೇಳಬೇಡ. ಯಮನೇ ಶ್ರೀರಾಮನು ಸಂದೇಹ ಬೇಡ ಹಾಗೂ ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ ಕೃತಿಯ ಮೂಲಕ ಕೇಳುಗರ ಮನಗೆದ್ದರು.
ವಯಲಿನ್‍ನಲ್ಲಿ ವಿದ್ವಾನ್ ಪ್ರಾದೇಶ ಆಚಾರ್ ಅವರು ಯುವ ಗಾಯಕಿಗೆ ಅತ್ಯುತ್ತಮ ಸಾಥ್ ನೀಡುವ ಮೂಲಕ ಸಭಿಕರ ಪ್ರಶಂಸೆಗೆ ಪಾತ್ರರಾದರು, ವಿದ್ವಾನ್ ಅನಿರುದ್ದ ಭಟ್ ಮತ್ತು ವಿದ್ವಾನ್ ರಘುನಂದನ್ ತನಿ ಆವರ್ತನದಲ್ಲಿ ಪರಸ್ಪರ ಪೈಪೋಟಿಗೆ ಬಿದ್ದವರಂತೆ ಮೃದಂಗ ಮತ್ತು ಘಟವನ್ನು ಬಾರಿಸುವ ಮೂಲಕ ನೋಡುಗರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.
ಸಾಂಸ್ಕøತಿಕ ಸಂಘದ ವತಿಯಿಂದ ಇದೇ ವೇಳೆ ನಂದಿನಿರಾವ್ ಗುಜರ್ ಅವರಿಗೆ ಸಾಂಸ್ಕøತಿಕ ಕಲಾ ಭೂಷಣ ಬಿರುದು ನೀಡಿ ಸನ್ಮಾನಿಸಲಾಯಿತು, ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಾಹಿತಿ ಡಾ|| ಸುಮತೀಂದ್ರ ನಾಡಿಗ. ಕೊಡಗು ಮತ್ತು ಕೇರಳದಲ್ಲಿ ಅತಿವೃಷ್ಠಿಯಿಂದ ನಿಧನರಾದವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷ ಎ.ಆರ್.ಶೇಷಾದ್ರಿ, ಅಧ್ಯಕ್ಷ ಎಂ.ಎಸ್.ಗಿರಿಧರ್ ಯತೀಶ್, ಉಪಾಧ್ಯಕ್ಷ ಆನಂದಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ನಿರ್ದೇಶಕ ಶಂಕರನಾರಾಯಣಭಟ್, ಆಶಾಕಿರಣದ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಸಿ.ರಮೇಶ್, ವಿನೀತ್ ಕುಮಾರ್ ಉಪಸ್ಥಿತರಿದ್ದರು.