ಪುನೀತ್ ಜೀವನ-ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಸಿಎಂಗೆ ಅಭಿಮಾನಿ ಪತ್ರ…

76
firstsuddi

ಮೈಸೂರು : ನಟ ಪುನೀತ್ ರಾಜ್ ಕುಮಾರ್ ಅವರ ಜೀವನ-ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂದು ಪುನೀತ್ ಅಭಿಯಾನಿಯೊಬ್ಬರು ಸರ್ಕಾರಕ್ಕೆ ಮನವಿ ಮಾಡಿದಲ್ಲದೇ, ಸಹಿ ಸಂಗ್ರಹ ಮಾಡುತ್ತಿದ್ದಾರೆ.

ಜಿಲ್ಲೆಯ ಟಿ.ನರಸೀಪುರದ ಮುಡುಕುತೊರೆ ಗ್ರಾಮದ ದೇವರಾಜ್ ಅರಸು ಎಂಬುವವರು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ  ಬರೆದಿದ್ದು, ಪುನೀತ್ ರಾಜಕುಮಾರ್ ಅಪ್ರತಿಮ ನಟ. ಸರಳತೆ, ಸ್ನೇಹ ಆದರ್ಶ. ಇವರ ಸಾಮಾಜಿಕ ಸೇವೆಗಳು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಹೀಗಾಗಿ ಅವರ ಜೀವನ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿ, ಸಹಿ ಸಂಗ್ರಹ ಮಾಡುತ್ತಿದ್ದಾರೆ.