ಫಸ್ಟ್ ಸುದ್ದಿ : ಪುರುಷರು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಹಾಲನ್ನು ತಪ್ಪದೆ ಸೇವನೆ ಮಾಡಿ. ಇದರಿಂದ ಆರೋಗ್ಯಕ್ಕೆ ಮಾತ್ರ ಒಳ್ಳೆಯದು ಅನ್ನುವುದುಕ್ಕಿಂತ, ಇನ್ನೂ ಹಲವಾರು ಪ್ರಯೋಜನಗಳಿವೆ. ಪುರುಷರು ಪ್ರತಿನಿತ್ಯ ಹಾಲನ್ನು ಯಾಕೆ ಸೇವನೆ ಮಾಡಬೇಕು ಇದರಿಂದ ಆಗುವ ಪ್ರಯೋಜನಗಳೇನು ಅನ್ನುವುದಕ್ಕೆ ಉತ್ತರ ಇಲ್ಲಿದೆ..
* ಹಾಲಿನಲ್ಲಿರುವ ಫ್ಯಾಟ್ ಮತ್ತು ಪ್ರೊಟೀನ್‌ನಿಂದಾಗಿ ಪುರುಷರಲ್ಲಿರುವ ಹಾರ್ಮೋನ್ಸ್ ಆಕ್ಟೀವ್ ಆಗಿರುತ್ತದೆ.
* ಒಂದು ಗ್ಲಾಸ್ ಹಾಲು ಸೇವನೆ ಮಾಡಿದರೆ ಪುರುಷರಿಗೆ 37 %ಕ್ಯಾಲ್ಶಿಯಂ ದೊರೆಯುತ್ತದೆ.
* ಹಾಲಿನಲ್ಲಿ ಇರುವ ಕ್ಯಾಲ್ಶಿಯಂ, ಸೋಡಿಯಂ ಮತ್ತು ಪೊಟ್ಯಾಶಿಯಂ ಮೊದಲಾದ ಇಲೆಕ್ಟ್ರೋಲೈಟ್ಸ್ ದೇಹಕ್ಕೆ ಎನರ್ಜಿ ನೀಡುತ್ತದೆ.
* ಹಾಲಿನಲ್ಲಿರುವ ಕ್ಯಾಲ್ಶಿಯಂ ಮತ್ತು ಪ್ರೊಟೀನ್ ಇದೆ. ಇದರಿಂದ ಬರ್ನಿಂಗ್ ಆಗುತ್ತದೆ.
* ಪ್ರತಿದಿನ ಹಾಲು ಕುಡಿಯುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ.
* ಹಾಲಿನಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಮಾಂಸ ಖಂಡಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಬಾಡಿ ಬಿಲ್ಡಿಂಗ್ ಮಾಡುವವರು ಪ್ರತಿ ದಿನ ಇದನ್ನು ಸೇವನೆ ಮಾಡಿದರೆ ಉತ್ತಮ.
* ಇನ್ನು ಹಾಲಿನಲ್ಲಿರುವ ವಿಟಮಿನ್, ಹಾಗೂ ಪೌಷ್ಠಿಕಾಂಶಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.