ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ- ಮನನೊಂದು ವ್ಯಕ್ತಿ ಆತ್ಮಹತ್ಯೆ…

69
firstsuddi

ಕೋಲಾರ: ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸ್ನೇಹಿತರೊಬ್ಬರ ಪತ್ನಿ ಬಗ್ಗೆ ಮೃತ ಶ್ರೀನಿವಾಸ್ ತಪ್ಪಾಗಿ ಮಾತಾಡಿದ ಎಂಬ ಕಾರಣಕ್ಕೆ ಪೊರಕೆಯಿಂದ ಹೊಡೆದು ನಿಂದಿಸಲಾಗಿದೆ.

ನಿನ್ನೆ ಸಂಜೆ ಎಣ್ಣೆ ಪಾರ್ಟಿ ಮಾಡುವಾಗ ತನ್ನ ಸ್ನೇಹಿತರ ಬಳಿ ಮಂಜುಳಾ ಎಂಬುವವರ ಬಗ್ಗೆ ಮೃತ ಶ್ರೀನಿವಾಸ್ ಮಾತನಾಡಿದ್ದ. ಆಗ ತನ್ನ ಹೆಂಡತಿ ಬಗ್ಗೆ ಮಾತನಾಡ್ತೀಯ ಎಂದು ಗಂಡ ಅಶೋಕ್ ಹಾಗೂ ಸ್ನೇಹಿತರಾದ ರಮೇಶ್, ಧರ್ಮಂದ್ರ, ಮಂಜು ಎನ್ನುವವರು ಶ್ರೀನಿವಾಸ್​ನ ಹಿಗ್ಗಾಮುಗ್ಗ ಥಳಿಸಿದ್ದರಂತೆ. ಅಲ್ಲದೆ ನಿನ್ನೆ ಅಶೋಕ್ ನ ಪತ್ನಿ ಮಂಜುಳ ಕೂಡಾ ಪೊರಕೆಯಿಂದ ಥಳಿಸಿ, ಪರಿಶಿಷ್ಟ ಜಾತಿ ಹೆಸರೇಳಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮನನೊಂದ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶ್ರೀನಿವಾಸ್ ಕುಟುಂಬಸ್ಥರು ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.