ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆಗೆ ಅರಿಶಿನ ಶಾಸ್ತ್ರ!

152
firstsuddi

ಜೈಪುರ್ : ಕೊರೊನಾ ಇರುವ ಕಾರಣದಿಂದಾಗಿ ರಜೆ ಸಿಗದ ಹಿನ್ನೆಲೆ ಮಹಿಳಾ ಪೇದೆಯೊಬ್ಬರು ಪೊಲೀಸ್ ಠಾಣೆಯಲ್ಲೇ ಅರಿಶಿನ ಶಾಸ್ತ್ರವನ್ನು ಆಚರಿಸಿಕೊಂಡಿದ್ದಾರೆ.

ಮದುವೆಯ ಹಿಂದಿನ ದಿನದ ಶಾಸ್ತ್ರವಾದ ಅರಿಶಿನ ಹಚ್ಚುವ ಕಾರ್ಯಕ್ರಮಕ್ಕೆ ರಜೆ ಸಿಗದ ಹಿನ್ನೆಲೆ ಪೊಲೀಸ್ ಠಾಣಾ ಆವರಣದಲ್ಲಿ ಹಳದಿ ಶಾಸ್ತ್ರ ನಡೆದಿದೆ. ಮಹಿಳಾ ಪೇದೆಗೆ ರಾಜಸ್ಥಾನದ ದುಂಗರ್ಪುರ್ ಕೊಟ್ವಾಲಿ ಪೊಲೀಸ್ ಠಾಣಾ ಸಿಬ್ಬಂದಿ ಸಂಭ್ರಮದಿಂದ ನಡೆಸಿಕೊಟ್ಟಿದ್ದಾರೆ. ಅರಿಶಿನ ಶಾಸ್ತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.