ವಿಚಾರಣೆಗಾಗಿ ಎಪಿಎಂಸಿ ಪೊಲೀಸ್ ಠಾಣೆಗೆ ಹಾಜರಾದ ನವ್ಯಶ್ರೀ.

58
firstsuddi

ಬೆಳಗಾವಿ : ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಮತ್ತು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರು-ಪ್ರತಿದೂರು ನೀಡಿದ್ದು, ಈ ಸಂಬಂಧ ನವ್ಯಶ್ರೀ ರಾವ್ ಅವರು ಇಂದು ವಿಚಾರಣೆಗಾಗಿ ಎಪಿಎಂಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಜುಲೈ 18ರಂದು ರಾಜಕುಮಾರ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನವ್ಯಶ್ರೀ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್ ಮೇಲ್ ಬಗ್ಗೆ ಉಲ್ಲೇಖಿಸಿದ್ದರು. ಇದಾದ ಬಳಿಕ ಜುಲೈ 23ರಂದು ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ದೂರು ನೀಡಿದ್ದರು. ನವ್ಯಶ್ರೀ ದೂರಿನಂತೆ (376)ಅತ್ಯಾಚಾರ, (366)ಕಿಡ್ನಾಪ್, (312)ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506)ಜೀವ ಬೆದರಿಕೆ, (509)ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ,(67A) ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆ್ಯಕ್ಟ್ ಗ ಳನ್ನು ಹಾಕಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನವ್ಯಶ್ರೀ ಅವರ ವಿಚಾರಣೆ ನಡೆಯಲಿದೆ. ಅಲ್ಲದೇ ನವಶ್ರೀ ಅವರನ್ನು ಮೆಡಿಕಲ್ ಚೆಕ್ ಅಪ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.