ಕೊಪ್ಪಳ : ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ನೀಡಿದ್ದ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು, ಪ್ರತಾಪ್ ಸಿಂಹ ಸಂಸದ ಆಗೋದಕ್ಕೆ ಲಾಯಕ್ಕಿಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಮೊದಲು ಚೆಕ್ ಮಾಡಬೇಕು. ಪ್ರತಾಪ್ ಸಿಂಹ ಝೀರೋ ಟ್ಯಾಲೆಂಟ್. ಯಾವುದೋ ಗಾಳಿಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆ. ಪ್ರತಾಪ್ ಸಿಂಹ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಹೋರಾಟ ಮಾಡಲಾಗುವುದು. ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡ್ತಾರೆ. ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಮುಖಂಡರೇ ಇದ್ದಾರೆ. ತನಿಖಾ ಸಂಸ್ಥೆಯಿಂದ ಎಲ್ಲವನ್ನೂ ಮರೆಮಾಚೋ ಕೆಲಸ ಮಾಡ್ತಿದ್ದಾರೆ. ಮೈನ್ ಆಗಿ ಬಿಟ್ ಕಾಯಿನ್ ಅಲ್ಲಿ ಇರೋದೇ ಬಿಜೆಪಿ ನಾಯಕರು ಎಂದು ಹೇಳಿದರು.
ಪ್ರತಾಪ್ ಸಿಂಹ ಹೇಳಿದ್ದೇನು..?
ಮೈಸೂರಿನಲ್ಲಿ ಇತ್ತೀಚೆಗಷ್ಟೇ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ. ರಾಜ್ಯ ಕಾಂಗ್ರೆಸ್ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ಎಂದು ಪ್ರಿಯಾಂಕಾ ಖರ್ಗೆಗೆ ತಿರುಗೇಟು ನೀಡಿದ್ದರು.










