ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಪಕ್ಷ ನಿರುದ್ಯೋಗಿ ದಿನಾಚರಣೆಯನ್ನಾಗಿ ಆಚರಿಸುತ್ತದೆ : ಅನಿಲ್

106
firstsuddi

ಕಳಸ : ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಪಕ್ಷ ನಿರುದ್ಯೋಗಿ ದಿನಾಚರಣೆಯನ್ನಾಗಿ ಆಚರಿಸುತ್ತದೆ ಎಂದು ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್ ಹೇಳಿದರು.

ಕಳಸ ಪಟ್ಟಣದಲ್ಲಿ ಇಂದು ಕಳಸ ಯೂತ್ ಕಾಂಗ್ರೆಸ್,ಬಿಜೆಪಿ ಸರ್ಕಾರದ ವೈಪಲ್ಯವನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಆಡಳಿತಕ್ಕೆ ಬರುವ ಮುಂಚೆ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡಿ,ಆಡಳಿತ ಸಿಕ್ಕ ನಂತರ ಪಕ್ಷಾಂತರ ಯುವಕರಿಗೆ ವಂಚಿಸಿದ್ದೂ ಅಲ್ಲದೆ ಲಕ್ಷಾಂತರ ಮಂದಿ ಉದ್ಯೋಗವನ್ನು ಕಳೆದುಕೊಳ್ಳವಂತೆ ಮಾಡಿದ್ದಾರೆ.

ಬೋಂಡ,ಪಕೋಡ ಮಾಡಿ ಉದ್ಯೋಗವನ್ನು ಮಾಡಬಹುದು ಎಂದು ಹೇಳಿದ ಪ್ರದಾನಿ,ಇಂದು ಪೆಟ್ರೋಲ್,ಡಿಸೇಲ್,ಅಡುಗೆ ಎಣ್ಣೆ,ಗ್ಯಾಸ್ ಬೆಲೆ ಏರಿಗೆ ಮಾಡಿ ಬೋಂಡ,ಪಕೋಡ ಮಾರಿ ಜೀವನ ಮಾಡದಂತೆ ಮಾಡಿದ್ದಾರೆ ಎಂದು ವ್ಯಂಗವಾಡಿದರು.ಹಿಂದೂ ದೇವಸ್ಥಾನಗಳನ್ನು ಒಡೆದು ಹಾಕಿ ಬಿಜೆಪಿ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ನಾಯಕರಿಗೆ ಘೆರಾವ್ ಹಾಕುವಂತಾಗಿದೆ.ಆಡಳಿತ ಪಕ್ಷವು ಹಿಂದೂ ಧರ್ಮದ ಭಾವನೆಗಳನ್ನು ಕೆಡಿಸುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್,ಕಾರ್ಯದರ್ಶಿಗಳಾದ ಸುಬಾನ್,ಆದರ್ಶ್,ಕೌಶಿಕ್, ಜಿಲ್ಲಾ ಯುವ ಕಾಂಗ್ರೆಸ್ ಸಾಮಾಜಿಕ ಜಾಲಾತಾಣದ ಅಧ್ಯಕ್ಷ ಸಂಸುದ್ಧೀನ್,ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್,ಕಳಸ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಹೇಶ್,ಮುಖಂಡರಾದ ಕೆ.ಆರ್.ಪ್ರಭಾಕರ್,ವಿಶ್ವನಾಥ್,ಸರ್ವಜಿತ್,ಸುಜಿತ್,ರಜಿತ್ ಕೆಳಗೂರು,ರಂಜನ್,ಸುಧೀರ್ ಇತರರು ಇದ್ದರು.