ಪ್ರಧಾನಿ ಮೋದಿ ಹತ್ಯೆ ಸೇರಿದಂತೆ ದೇಶದ ಹಲವೆಡೆ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಇರುವ ಇಮೇಲ್ ರವಾನೆ…

53
firstsuddi

ಪುಣೆ: ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸೇರಿದಂತೆ ದೇಶದ ಹಲವೆಡೆ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಕರೆ, ಪತ್ರಗಳ ಸರಣಿ ಮುಂದುವರೆದಿದೆ. ಇಂದು ಕೂಡ ಮತ್ತೊಂದು ಬದರಿಕೆ ಪತ್ರ ರವಾನಿಸಲಾಗಿದೆ.

ಪುಣೆಯ ದೀನಾನಾಥ್ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ಈ ಇಮೇಲ್ ಬಂದಿದೆ. ತಕ್ಷಣವೇ ಅವರು ನಗರ ಪೊಲೀಸ್ ಪಡೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮೋಖಿಮ್ ಎಂಬ ಹೆಸರಿನಲ್ಲಿ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ. ಅದು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾನು ಹಲವಾರು ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ಮಾಡುತ್ತಿದ್ದೇನೆ. ಕೆಲ ಧರ್ಮಗಳ ಜನರನ್ನು ದೇಶದಿಂದ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಇದ್ದಾರೆ. ಭಾರತದ ವಿವಿಧೆಡೆ ಬಾಂಬ್ ಸ್ಪೋಟಗಳನ್ನು ನೀಡಲಾಗುವುದು ಎಂದು ಆ ಮೇಲ್‍ನಲ್ಲಿ ಬರೆಯಲಾಗಿದೆ.