ಪ್ರವಾಸಿಗರ ವಸತಿ ಗೃಹದಲ್ಲಿ ಅವ್ಯವಹಾರ – ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

81
firstsuddi

ಚಿಕ್ಕಮಗಳೂರು : ತಾಲ್ಲೂಕಿನ ದತ್ತಪೀಠದಲ್ಲಿರುವ ಮುಜರಾಯಿ ಇಲಾಖೆಯ ಪ್ರವಾಸಿಗರ ವಸತಿ ಗೃಹದಲ್ಲಿನ ಅವ್ಯವಹಾರದ ವಿರುದ್ದ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ನಿನ್ನೆ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳೂ ವಸತಿ ಗೃಹದಲ್ಲಿಲ್ಲ, ಸ್ವಚ್ಚತೆಯಿಲ್ಲ, ವಸತಿ ಗೃಹ ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿದರು.

ವಸತಿಗೃಹದ ಕೊಠಡಿಗೆ ಮುಜರಾಯಿ ಇಲಾಖೆ ದಿನವೊಂದಕ್ಕೆ 150 ರೂ ದರವನ್ನು ನಿಗದಿಪಡಿಸಿದೆ, ಆದರೆ ಅದಕ್ಕೆ ತದ್ವಿರುದ್ದವಾಗಿ ಪ್ರವಾಸಿಗರಿಂದ ದಿನವೊಂದಕ್ಕೆ 500 ರಿಂದ 800 ರೂ ವಸೂಲಿ ಮಾಡಲಾಗುತ್ತಿದೆ ಅದಕ್ಕೆ ಯಾವುದೇ ರಸೀತಿ ನೀಡುತ್ತಿಲ್ಲ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಅವ್ಯವಹಾರದ ವಿರುದ್ದ ಕ್ರಮ ಕೈಗೊಳ್ಳಬೇಕು, ವಸತಿ ಗೃಹಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಗುತ್ತಿಗೆದಾರರನ್ನು ಬದಲಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮಾನಾಯಕ್ ಜಿಲ್ಲಾಧ್ಯಕ್ಷ ಪಿ.ಕುಮಾರ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಸಹಕಾರ್ಯದರ್ಶಿ ಇರ್ಫಾನ್ ಪಾಶಾ, ಸಂಘಟನಾ ಕಾರ್ಯದರ್ಶಿ ಎಂ.ಡಿ.ಎನ್ ಭಾಷಾ, ಮಂಜುನಾಥ್, ಅನಂತಕುಮಾರ್ ಹಾಜರಿದ್ದರು.