ಪ್ರೊಬೆಷನರಿ ಮಹಿಳಾ ಪಿಎಸ್ಐ ಮೇಲೆ ದರ್ಪ ತೋರಿ, ಬೈಕ್​ನಿಂದ ಗುದ್ದಿ ದಮ್ಕಿ ಹಾಕಿದ ವ್ಯಕ್ತಿ ಅರೆಸ್ಟ್…

64
firstsuddi

ಬೆಂಗಳೂರು: ಪ್ರೊಬೆಷನರಿ ಮಹಿಳಾ ಪಿಎಸ್ಐ ಮೇಲೆ ವ್ಯಕ್ತಿಯೋರ್ವ ನಿಂದನೆ ಮಾಡಿರುವ ಘಟನೆ ಗೋವಿಂದರಾಜನಗರದ ಸುಬ್ಬಣ್ಣ ಗಾರ್ಡನ್ ಬಳಿ ನಡೆದಿದೆ. ಗೋವಿಂದರಾಜನಗರ ನಿವಾಸಿಯಾಗಿರುವ ಭರತ್ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದನು. ಇದನ್ನು ಕಂಡ ಪ್ರೊಬೆಷನರಿ ಮಹಿಳಾ ಪಿಎಸ್ಐ ಅಶ್ವಿನಿ ಹಿಪ್ಪರಗಿ ಬೈಕ್ ತಡೆದು ಬುದ್ಧಿವಾದ ಹೇಳಿ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದರು.

ಪಿಎಸ್ಐ ಅಶ್ವಿನಿ ಅವರನ್ನು ಹಿಂಬಾಲಿಸಿದ ಭರತ್, ತನ್ನ ಬೈಕ್​ನಿಂದ ಅವರ ಬೈಕ್​ಗೆ ಗುದ್ದಿದ್ದಾನೆ. ಬಳಿಕ ನನ್ನತ್ರ ಇಟ್ಕೊಂಡ್ರೆ ಇದೇ ಗತಿ ಅಂತ ದಮ್ಕಿ ಹಾಕಿ ಎಸ್ಕೇಪ್ ಆಗಿದ್ದಾನೆ. ಬೈಕ್ ಡಿಕ್ಕಿ ರಭಸಕ್ಕೆ ಪಿಎಸ್ಐ ಅಶ್ವಿನಿ ಹಿಪ್ಪರಗಿ ಕೆಳಗೆ ಬಿದ್ದಿದ್ದು, ಸಣ್ಣ ಪುಟ್ಟ ಗಾಯವಾಗಿದ್ದು, ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.

ತಕ್ಷಣ ಎಚ್ಚೆತ್ತ ಗೋವಿಂದರಾಜನಗರ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆ ಬದಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ಭರತ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ದೌರ್ಜನ್ಯವೆಸಗಿದ ಹಾಗೂ ಪಿಎಸ್ಐ ಬೈಕ್​ಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಹಿನ್ನೆಲೆ ಆರೋಪಿ ವಿರುದ್ಧ ರೌಡಿಶೀಟ್ ತೆರೆಯಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.