ಫೆ.9 ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ಪ್ರವಾಸಿಗರಿಗೆ ಇಲ್ಲ ಅವಕಾಶ…

73
firstsuddi

ಬೆಂಗಳೂರು : ಫೆ.9 ರಂದು ಒಂದು ದಿನ ಪ್ರವಾಸಿಗರಿಗೆ ಬೆಂಗಳೂರಿನ ಉದ್ಯಾನವನ ವೀಕ್ಷಣೆಯನ್ನು ನಿಷೇಧಿಸಲಾಗಿದೆ.

ಭೂ ಅಪಮೌಲ್ಯೀಕರಣದ ಪ್ರತಿಬಂಧನ (ತಡೆ), ಜೀವ ಪರಿಸರ ಮರುಸ್ಥಾಪನೆಯ ತ್ವರಿತಗೊಳಿಸುವಿಕೆ, ಜೀವ ವೈವಿಧ್ಯತೆಯ ಸಮೃದ್ದೀಕರಣ ವಿಷಯದಡಿ ಬೆಂಗಳೂರಿನಲ್ಲಿ ಫೆ.9 ರಿಂದ 12 ರವರೆಗೆ ಸಭೆ ನಡೆಯಲಿದೆ. ಸಭೆಯ ಭಾಗವಾಗಿ ಜಿ 20 ಸದಸ್ಯರು ಬೆಂಗಳೂರಿನ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ.

ಫೆ.9 ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಆಯ್ಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಪ್ರತಿನಿಧಿಗಳು ಉದ್ಯಾನವನದ ವೀಕ್ಷಣೆಗೆ ಬರುವುದರಿಂದ ಭದ್ರತೆಯ ದೃಷ್ಟಿಯಿಂದ ಜೈವಿಕ ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನ ಬಂದ್ ಆಗಿಲಿದೆ.