ವಾಷಿಂಗ್ಟನ್ : ಫೇಸ್‍ಬುಕ್‍ನ ಮಾತೃಸಂಸ್ಥೆಯ ಹೆಸರನ್ನು ‘ಮೆಟಾ’ ಎಂದು ಬದಲಾಯಿಸಲಾಗಿದೆ ಎಂದು ಫೇಸ್‍ಬುಕ್‍ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ನಿನ್ನೆ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಫೇಸ್ಬುಕ್, ಇನ್ ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಈ ಎಲ್ಲ ಸೋಶಿಯಲ್ ಮೀಡಿಯಾಗಳನ್ನು ಒಟ್ಟಿಗೆ ತರಲಾಗುತ್ತದೆ. ಆದರೆ ಉದ್ಯೋಗ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ತಮ್ಮ ಕಂಪನಿಯನ್ನು ಮೆಟಾ ಎಂಬ ಹೆಸರಿನಲ್ಲಿ ಬ್ರಾಂಡಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ‘ಮೆಟಾವರ್ಸ್’ ಅನ್ನು ಸಾಧಿಸುವ ಸಲುವಾಗಿ ಈ ಹೆಸರು ಇಟ್ಟಿರುವುದಾಗಿ ಜುಕರ್‌ಬರ್ಗ್ ಸ್ಪಷ್ಟನೆ ನೀಡಿದ್ದಾರೆ.
ಮೆಟಾವರ್ಸ್ ಒಂದು ವಿಶಾಲವಾದ ಅರ್ಥ ನೀಡುವ ಪದವಾಗಿದೆ. ಸಾಮಾಜಿಕ ಜಾಲತಾಣಗಳ ವಿಚಾರಕ್ಕೆ ಬರುವುದಾದರೆ ಇಂಟರ್ ನೆಟ್ ಮೂಲಕ ಒಬ್ಬ ವ್ಯಕ್ತಿ ವರ್ಚುವಲ್ ಮಾದರಿಯಲ್ಲಿ ( ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಮಾದರಿಯಲ್ಲಿ ಅಥವಾ ಬೇರೆ ಮಾದರಿಗಳಲ್ಲಿ) ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದಾಗಿದೆ.










