ಬಟ್ಟೆ ಅಂಗಡಿಗೆ ನುಗ್ಗಿದ ಬೈಕ್ – ವೀಡಿಯೋ ವೈರಲ್…

78
firstsuddi

ಹೈದರಾಬಾದ್ : ಬೈಕ್ ಸವಾರ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಯ ಒಳಗೆ ನುಗ್ಗಿದ್ದಾನೆ. ಈ ಘಟನೆ ಸೋಮವಾರ ರಾತ್ರಿ 8.30ರ ಸುಮಾರಿಗೆ ತೆಲಂಗಾಣದ ಖಮ್ಮಂ ಜಿಲ್ಲೆಯ ರಾವಿಚೆಟ್ಟು ಬಜಾರ್‌ನಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬ್ರೇಕ್ ಫೇಲ್ ಆಗಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಬಜಾಜ್ ಪಲ್ಸರ್ ಬೈಕ್ ಅಂಗಡಿಯ ಒಳಗೆ ನುಗ್ಗಿದ್ದು, ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. 4 ಜನರು ಅಂಗಡಿಯೊಳಗೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವಾಹನ ಸವಾರ ಕೌಂಟರ್ ಗೆ ಜಿಗಿದಿರುವುದನ್ನು ಕಾಣಬಹುದಾಗಿದೆ. ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ಜೊತೆಗೆ ಬೈಕ್ ಸವಾರನಿಗೂ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಘಟನೆ ಕುರಿತಂತೆ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.