ಮೂಡಿಗೆರೆ : ಹಸು ಹಾಗೂ ಕರುಗಳು ಮೆಸ್ಕಾಂ ಇಲಾಖೆ ಸಬ್ ಸ್ಟೇಷನ್ ನಿರ್ಮಾಣಕ್ಕೆ ತೆಗೆದ ತಳಪಾಯದ ಗುಂಡಿ ಒಳಗೆ ಬಿದ್ದಿರುವ ಘಟನೆ ತಾಲ್ಲೂಕಿನ ಬಣಕಲ್ ಗ್ರಾಮದ ಸುಭಾಷ್‍ನಗರದಲ್ಲಿ ನಡೆದಿದ್ದು, ತಡರಾತ್ರಿಯಿಂದ ಮೇವು ನೀರಿಲ್ಲದೆ ಗುಂಡಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದು, ಯಾರಾದರು ನನ್ನ ರಕ್ಷಣೆಗೆ ಬರುತ್ತಾರ ಎಂದು ಕಾದು ಕೂತಿದ್ದು, ಇದರ ಪಕ್ಕದಲ್ಲೇ ಅಂಗನವಾಡಿ ಹಾಗೂ ವಿದ್ಯಾಭಾರತಿ ಶಾಲೆ ಇದ್ದು, ದಿನನಿತ್ಯ ಮಕ್ಕಳು ಓಡಾಡುವ ಜಾಗದಲ್ಲಿ ಈ ತರ ಗುಂಡಿ ತೆಗೆದು ಬಿಟ್ಟಿರುವುದು ಅಪಾಯಕ್ಕೆ ಕಾರಣವಾಗಿದ್ದು, ಇದು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









