ಬರಗಾಲಕ್ಕೆ ಮೊದಲ ಬಲಿ- ಬೆಳೆ ನಾಶದಿಂದ ಮನನೊಂದು ಚಿಕ್ಕಮಗಳೂರಿನ ರೈತ ಆತ್ಮಹತ್ಯೆ…

84
firstsuddi

ಚಿಕ್ಕಮಗಳೂರು: ಮಳೆಯಿಲ್ಲದೆ ಈರುಳ್ಳಿ ಬೆಳೆ ನಾಶಗೊಂಡ ಹಿನ್ನೆಲೆ ತನ್ನ ಹೊಲದಲ್ಲೇ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ.

ಸತೀಶ್( 49) ನೇಣಿಗೆ ಶರಣಾದ ರೈತ. ಮಳೆ ನಿರೀಕ್ಷೆಯಲ್ಲಿದ್ದ ಗಿರಿಯಾಪುರ ಗ್ರಾಮದ ರೈತ ಸತೀಶ್ ಎಂಬವರು ಸಾಲ ಮಾಡಿ ತನ್ನ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮುಂಗಾರು ವೈಫಲ್ಯ ಮತ್ತು ಬರಗಾಲದಂತಹ ಪರಿಸ್ಥಿತಿಯಿಂದಾಗಿ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿವೆ.

ಇದರಿಂದ ಮನನೊಂದ ರೈತ ಸತೀಶ್, ಜಮೀನಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಅಜ್ಜಂಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.