ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ…

23
firstsuddi

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಬಳ್ಳಾರಿ- ಇ ತುಕರಾಂ.
ಚಾಮರಾಜನಗರ- ಸಚಿವ ಎಚ್​ಸಿ ಮಹಾದೇವಪ್ಪ ಅವರ ಪುತ್ರ ಸುನೀಲ್ ಬೋಸ್.
ಚಿಕ್ಕಬಳ್ಳಾಪುರ- ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ.
ಕೋಲಾರ- ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ.ಗೌತಮ್.

ಒಟ್ಟಾರೆ ಸಚಿವರನ್ನು ಲೋಕಸಭೆ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು. ಆದ್ರೆ ರಾಜ್ಯ ರಾಜಕಾರಣ ಬಿಟ್ಟು ಹೋಗಲು ಯಾವ ಸಚಿವರು ಕೂಡ ಒಪ್ಪಲಿಲ್ಲ. ಹೀಗಾಗಿ ಸಂಪನ್ಮೂಲ ಕ್ರೂಢೀಕರಣ ಮುಂತಾದ ಲೆಕ್ಕಾಚಾರಗಳೊಂದಿಗೆ ಕಾಂಗ್ರೆಸ್ ನಾಯಕರ ಪುತ್ರರು, ಬಂಧುಗಳಿಗೆ ಮಣೆ ಹಾಕಿದೆ. ಇತರ ರಾಜ್ಯಗಳಲ್ಲೂ ಹೊಸ ಮುಖಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದ್ದು, ಯುವಕರ ಮತ ಬ್ಯಾಂಕ್ ಹಾಗೂ ಭವಿಷ್ಯದಲ್ಲಿ ಪಕ್ಷಕ್ಕಾಗುವ ಲಾಭವನ್ನು ಗಮನದಲ್ಲಿರಿಸಿಕೊಂಡಿದೆ.